ಬಲಿಗಾಗಿ ಬಲೆ ನೇಯುವ ಕಲೆ.

ಅದ್ಭುತ ವಿನ್ಯಾಸ ಎಷ್ಟು ಸುಂದರ ನೀ ಹೆಣೆದಾ ಬಲೆಯ ಕಲೆ… ಕುಗ್ಗದ  ಉತ್ಸಾಹ, ಅವಿಶ್ರಾಂತ ದುಡಿಮೆ, ಮರಳಿ ಯತ್ನವ  ಮಾಡೆನುವ  ಸಂದೇಶ ಸಾರುತ… ಬಲಿಗಾಗಿ ಬಲೆಯ ನೇಯ್ದು ಬರೆವೆ ನೀ ಮರಣ ಶಾಸನವ… ನೀ ರಚಿಸಿದಾ ಚಕ್ರವ್ಯೂಹದ ಸುಳಿಗೇ ಸಿಲುಕಿ ಬಲಿಯಾಗುವ, ನಿನ್ನ ಬದುಕು ಎಂತಹ ವಿಪರ್ಯಾಸ… ಮೂಲ ಕೃತಿ: ಕಮಲ ಬೆಲಗೂರ್. The Art of Trapping prey. !! Amazing design, How beautiful is, the Art of Trap  Weaved by […]

ಕರ್ತವ್ಯ, ನಂಬಿಕೆ, ವಿಶ್ವಾಸಗಳೆಂಬ ದೇವರ ನೆರಳಿನಲ್ಲಿ……..

ನಂಬಿಕೆ ಜೀವನದ ಮೂಲಾಧಾರ. ಪ್ರತಿಯೊಂದು ಜೀವಿಗೂ ಸಹ ತನ್ನ ಸುರಕ್ಷತೆಯ ಬಗೆಗಿನ ಅರಿವು ಇದ್ದೇ ಇರುತ್ತದೆ. ಇವತ್ತು ಮಲಗಿ ನಾಳೆ ಏಳುತ್ತೇನೆಯೆಂಬ ಭರವಸೆಯ ಮೇಲೆಯೇ ಮನುಷ್ಯ ಬದುಕುತ್ತಾನೆ. ಇಡೀ ಜಗತ್ತಿಗೇ ಬೆಳಕನ್ನಿತ್ತು ಪೋಷಿಸುವ ಸೂರ್ಯನು ಸಕಲ ಕೋತಿ ಚರಾಚರ ಜೀವಿಗಳ ಜೀವಾಧಾರ. ಇಂದು ಮುಳುಗಿ ಕತ್ತಲ ಮರೆಗೆ ಸರಿದರೂ ನಾಳೆ ಮತ್ತೆ ಉದಯಿಸಿ ಬೆಳಗುತ್ತಾನೆಂಬ ಭದ್ರ ಅಡಿಪಾಯದ  ಮೇಲೆಯೇ ಎಲ್ಲಾ ಜೀವಜಾಲದ ಬದುಕು ನಿಂತಿದೆ.            ನಂಬಿಕೆಗಳು ಬಾಂದವ್ಯ ಬೆಸೆಯುವ ಕೊಂಡಿಗಳು. ಅಸಹನೀಯ […]

Thank you all for following my blog. 😊 All the best for you all.. thank u a lot.. ನನ್ನ ಬ್ಲಾಗ್ ಅನ್ನು ಅನುಸರಿಸಲು ನಿಮ್ಮ ಅಮೂಲ್ಯವಾದ ಸಮಯವನ್ನು ತೆಗೆದುಕೊಂಡಿದ್ದಕ್ಕಾಗಿ ಧನ್ಯವಾದಗಳು.

ನಿನ್ನ ಸ್ನೇಹದ ಪರಿಯ ನಾನರಿಯೆ.‌‌‌‌..

ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲೀ ಪಯಣಿಗ ನಾನಮ್ಮಾ” ಮಧುರ ಕಲ್ಪನೆ . ಸ್ನೇಹ ನಿರಂತರ. ಅಲ್ಲಿ ಸ್ವಾರ್ಥದ ಸೋಂಕಿಲ್ಲ,ಅಂತಸ್ತಿನ ಲೆಕ್ಕಾಚಾರವಿಲ್ಲ, ಬಾಲ್ಯ,ಯವ್ವನ,ಮುಪ್ಪಿನ ಭೇಧವಿಲ್ಲ. ಓ ಗೆಳತಿ ನಿನ್ನ ಸ್ನೇಹ ಶ್ರೀಗಂಧದ ಪರಿಮಳದಂತೆ.ಬಾಲ್ಯದ ಆ ಸವಿನೆನಪು ನನ್ನ ಬದುಕನ್ನು ಹಸಿರಾಗಿಸಿದೆ.ಸ್ನೇಹ ಜುಳು ಜುಳು ಹರಿಯುವ ಜಲಧಾರೆಯಂತೆ.ಕೃಷ್ಣ-ಸುದಾಮ, ಕರ್ಣ-ಧುರ್ಯೋಧನರೂ ಸ್ನೇಹದ ದೋಣಿಯ ಪಯಣಿಗರೇ….       ಒಮ್ಮೆ ಹೀಗಾಯ್ತು .ಕರ್ಣ ಮತ್ತು ಧುರ್ಯೋಧನನ ಅರಸಿ ಪಗಡೆಯಾಟದಲ್ಲಿ ತೊಡಗಿದ್ದರು.ಆಟಕ್ಕೆ ಕಳೆ ಬಂದಿತ್ತು.ಆಗಲೇ ಧುರ್ಯೋಧನ ಆಗಮಿಸಿದನು.ಪತಿಯನ್ನು ಕಂಡು ರಾಣಿಯು ಆಟವನ್ನು ಅರ್ಧಕ್ಕೆ ನಿಲ್ಲಿಸಿ ಹೊರಟಾಗ ಕರ್ಣನು […]

ರೆಕ್ಕೆ ಇದ್ದರೆ ಸಾಕೆ …..

ಬಾಲ್ಯದಿಂದಲೂ ಮನದಾಳದಲ್ಲಿ ಅಡಗಿದ್ದ ಸುಪ್ತ ಬಯಕೆಯನ್ನು ಸಾಕಾರಗೊಳಿಸಲು ಪ್ರೇರಣೆ ಮತ್ತು ಅವಕಾಶ ಸಿಕ್ಕಾಗ ,ಕಲ್ಲಿನಲ್ಲಿ ಕವಿತೆಯರಳಿಸುವ ಛಾತಿ ನಮ್ಮಲ್ಲಿದ್ದಾಗ ಪ್ರತಿ ಅನುಭವವನ್ನೂ ಗೆಲುವಿನ ಮೆಟ್ಟಿಲಾಗಿಸುವ ಛಲ ಇದ್ದಲ್ಲಿ ಗೆಲುವು ನಮ್ಮದಾಗುತ್ತದೆ. ಸಪ್ತ ಸಾಗರದಾಚೆಯ ಸುಪ್ತಸಾಗರದೆಡೆಗಿನ ಪ್ರಯಾಣ, ನಮ್ಮ ಪ್ರಯಾಸಕ್ಕೆ ಸಂದ ಫಲವಾಗಿರುತ್ತದೆ.       ಅನಿಶ್ಚಿತತೆಯ ಬಿರುಗಾಳಿಗೆ ಸಿಕ್ಕು ಬೆಳಗಲು ಸೆಣೆಸಾದುತ್ತಿರುವ ದೀಪಗಳ ನಡುವೆ ತನ್ನನ್ನು ತಾನು ರಕ್ಷಿಸಿಕೊಂಡು ಪ್ರಕಾಶಮಾನವಾಗಿ ಉರಿದು ಪ್ರಭೆಯನ್ನು ನೀಡುವುದು ಸುಲಭದ ಮಾತಲ್ಲ. ಒಂದು ಸುಂದರ ಬೆಳಗು ಜನ್ಮಿಸಲು ಲಕ್ಷಲಕ್ಷ ತಾರೆಗಳ ಬಲಿಯಾಗಬೇಕಷ್ಟೇ !!       ಬ್ರಹ್ಮಾಂಡದ […]

ಅರ್ಧನಾರೀಶ್ವರ ಕಲ್ಪನಾ ಛಾಯೆಯಲಿ…..

ನರ ; ನಾರಿರೂಪ-ಸ್ವರೂಪಭಿನ್ನ-ವಿಭಿನ್ನ .ಆದರೇನುಭಾವ : ಶಕ್ತಿಯಅರ್ಧನಾರೀಶ್ವರಕಲ್ಪನಾ ಛಾಯೆಯವಿನೂತನ ಸಂಗಮ… ಸ್ರೃಷ್ಠಿಯ ಕಣ ಕಣದಿಆವರಿಸಿಹ ಮಮತಾ ಮೂರ್ತಿ ಕೋಮಲೆ ,ದೈವರೂಪಿ , ಜಗಜ್ಜನನಿಯಂತೆ ಚಿತ್ರಿಸಿದವರೇ ಚಂಡಿ, ಚಾಮುಂಡಿಯೆಂದರು.ಎಲ್ಲ ಅವರವರ ಭಾವಕ್ಕೆಅವರವರ ನೇರಕ್ಕೆ… ಹೊನ್ನು,ಮಣ್ಣು ,ಹೆಣ್ಣ ಪಡೆವ ಭರದಿ ಸುಮಂಗಲೆಯಾಗಿಸಿ,ನಿತ್ಯ ಸುಮಂಗಲೆಯನ್ನಿಸಿನಿನ್ನ ಅಸ್ಥಿತ್ವಕ್ಕೇ ಚ್ಯುತಿತಂದ ವೀರಾಗ್ರಣಿಮನುಕುಲ ತಿಲಕರು… ಮಾನಾಪಮಾನದ ಅಂಕುಶ ಶೋಭಿತೆ, ದಿಕ್ಕಿಲ್ಲದ ಹಕ್ಕಿಲ್ಲದದಾರಿಯಲಿ ನೀ ನಡೆದೆ..ಆಡಿಸುವ ಕೈಗಳ ಗೊಂಬೆಯಾದೆ.ಕುಣಿ ಎನ್ನಲು ಕುಣಿದೆ ನಲಿದೆ.ಅದೇ ಜಗದ ನಿಯಮವೆಂದೆ… ಅರಿವು ತಿಳಿದೆದ್ದು ಮರ್ಧನಕೆ ಕಾದಿಹ ಮದನಾರಿಯಂತಿರ್ಪಉಗ್ರ ಸ್ವರೂಪಿ ಹೆಣ್ಣೇನಿನ್ನ ರೂಪಕ್ಕೆಣೆಯಿಲ್ಲ ತಾಯೇ…             ಕಮಲ ಬೆಲಗೂರ್ Original post.. Ardha […]

ಕಡಲೂ ನಿನ್ನದೆ ಒಡಲ ಕಿಚ್ಚೂ ನಿನ್ನದೆ ಮುಳುಗದಿರಲಿ….

ಮನದ ತುಂಬ ಕತ್ತಲು ಮುಸುಕಿದೆಯಾವುದೋ ಮಾಯಾರಾಗದ ಜಾಲದಿ ಬಂದಿತಏಕಾಕಿ ಮನ ಹೊರಟಿದೆಸಾಗರದಲೆಗಳನಡುವೆ ನಾವಿಕನಿಲ್ಲದನಾವೆಯಲ್ಲಿ ದೂರ ದಡದ ಗೂಡನರಸಿ… ಸುತ್ತಾ ನೀರು ಮೇಲೆನೀಲ ನಭದ ವಿಸ್ತಾರ.ಬೀಸುವ ಗಾಳಿಗೆ ದೀಪದಕೆನ್ನಾಲಿಗೆ ನಾವೆಯಆವರಿಸಿ ಏಳುತ್ತಾ ಬೀಳುತ್ತಾಸಾಗುತ್ತಿರಲು ದೂರದಿಂದಅಲೆಯಲೆಯಾಗಿ ತೇಲಿಬರುತಲಿದೆ ಇಂಪಾದ ಗಾನ… ಇದೇನು ಕನಸೋ ನನಸೋಅರಿಯದಾಗಿದೆ ಮನ…ನಾವಿಕನಿಲ್ಲದ ನಾವೆಮುಳುಗುವುದು ಖಚಿತಸಾಗುವಷ್ಟು ಸಮಯ ಸಾಗಲಿಉಳಿಸುವ ಅಳಿಸುವ ಜವಾಬ್ದಾರಿಕಡಲಿನದ್ದೇ… ಉದಾಸನಾಗದಿರು ಮನವೇಹುಡುಕಾಟದ ಹಾದಿಹೂವಿನ ಹಾಸಿಗೆಯಲ್ಲವೆಂಬ ಸತ್ಯದ ಅರಿವುನಿನಗಿದೆಯಲ್ಲಾ..ಸುಂದರ ಬೆಳಕುಜನ್ಮಿಸಲು ಅಗಣಿತತಾರೆ ಚಂದ್ರಮರ ಕೊನೆಯಾಗಬೇಕು…. ಕಡಲೂ ನಿನ್ನದೆಒಡಲ ಕಿಚ್ಚೂ ನಿನ್ನದೆಬದುಕಿನ ನಾವೆಮುಳುಗದಿರಲೆಂಬುದೇನಮ್ಮ ಪ್ರಾರ್ಥನೆ…. ಕಮಲ ಬೆಲಗೂರ್

ಲೋಕದ ಡೊಂಕ ನೀವೇಕೆ ತಿದ್ದುವಿರಿ?

ಬದುಕು ಅನಿವಾರ್ಯ ಎಲ್ಲರಿಗೂ ದೂರುತ್ತಲೇ ಸಾಗುವ ಭೋಗಿಗೂ, ಬದುಕಿಂದ ದೂರ ಸರಿದ ಯೋಗಿಗೂ… ಬದುಕ ಗತಿಯ ಬದಲಿಸಿ ಹಸನಾಗಿಸಿ ತನ್ನ ಪಥವಾಗಿಸಿ ಕೊಂಡವ ನಿಜಯೋಗಿ…            ಹೀಗೊಂದು ಕಥೆ ಎಲ್ಲೋ ಕೇಳಿದ್ದು.  ಒಂದೂರಲ್ಲಿ ಒಬ್ಬ ರಾಜನಿದ್ದ.  ಅವನ ರಾಜ್ಯ ಸಂಪದ್ಭರಿತವಾಗಿತ್ತು. ನೆಮ್ಮದಿಯ ತಾಣವಾಗಿತ್ತು. ಹೀಗಿರಲು ಒಮ್ಮೆ ರಾಜನಿಗೆ ರಾಜ್ಯಾದ್ಯಂತ ತಿರುಗಾಡುವ ಆಸೆಯಾಯ್ತು. ತಿರುಗಾಡಲು ಹೊರಟನು. ರಸ್ತೆಗಳು ಕಲ್ಲುಮುಳ್ಳುಗಳಿಂದ ಕೂಡಿದ ರಸ್ತೆಯಲ್ಲಿ ಬರಿ ಕಾಲಿನಲ್ಲಿ ನಡೆದದ್ದರಿಂದ ರಾಜನ ಕಾಲಿಗೆ ಗಾಯಗಳಾದವು. ಬೇಸರಗೊಂಡ ರಾಜನು ಇಡೀ ರಾಜ್ಯದ ಎಲ್ಲ […]

West African Mythology

The spider trickster: When a spirit tried to capture all the world’s wisdom Anansi, in the form of spider, once decided to hoard the entire world’s wisdom in a pot for himself. When he succeeded, he attempted to hide the pot at the top of a tree where nobody could find it. He tied the […]

ಅವನಿಗರಿವಿಲ್ಲ ಅವನೂರ ದಾರಿ…

ಅವನೊಬ್ಬ ಅಲೆಮಾರಿ ನಿತ್ಯ ಸಂಚಾರಿ ಅವನಿಗಿಲ್ಲ  ಸಹಚಾರಿ ಅವನಿಗರಿವಿಲ್ಲ ಅವನೂರ ದಾರಿ….. ಅವನಡಿಯಿಟ್ಟಲ್ಲಿ ಬದುಕು ಭೂಮಿಯೇ ಹಾಸಿಗೆ ಗಗನವೇ ಹೊದಿಕೆ. ನಿನ್ನೆಗಳ  ಅರಿವಿಲ್ಲ ನಾಳೆಯಾ  ಚಿಂತೆಯಿಲ್ಲ ಬದುಕೆಂಬ ಮಾಯೆಯ ಸೆಳೆತವಿಲ್ಲ ; ಬೇಗೆಯಿಲ್ಲ, ಬೇಗುದಿಯಿಲ್ಲ; ಕುಹಕವಿಲ್ಲ, ಬದುಕಿನೆಡೆಗೆ  ಮರುಕವಿಲ್ಲ. ಅತಂತ್ರತೆಯ ಗೊಡವೆಯಿಲ್ಲ ಬದುಕಿನೆಡೆಗೆ  ಬೆರಗಿಲ್ಲ. ಅವನು ನಡೆದದ್ದೇ ಅವನ ಹಾದಿ …. ಬಾಲ್ಯವಿಲ್ಲ , ಯವ್ವನವಿಲ್ಲ ಮುಪ್ಪಿನಾ   ಭಯವಿಲ್ಲ . ಅಹಂಕಾರವಿಲ್ಲ ; ಮೌಡ್ಯತೆಯಿಲ್ಲ , ಲೋಕದ  ಡೊಂಕವ ತಿದ್ದುವ ನೆನೆಗುದಿಯಿಲ್ಲ. ಬೆತ್ತಲೆ  ಬದುಕಿನ ಹರಿಕಾರನು ಅವನು… […]