ಥೋಂಡಿ ಮುಥಲಮ್ ದೃಕ್ಸಾಕ್ಷಿಯಂ(The Exhibits and the Eye Witness) ಚಿತ್ರ ವಿಮರ್ಶೆ..

ನಾನು ಹಾಟ್ ಸ್ಟಾರ್ ನಲ್ಲಿ  ಥೋಂಡಿ ಮುಥಲಮ್ ದೃಕ್ಸಾಕ್ಷಿಯಂ (ದಿ ಎಕ್ಸಿಬಿಟ್ಸ್ ಮತ್ತು ಐ ವಿಟ್ನೆಸ್) ಚಿತ್ರ ನೋಡಿದೆ. ಈ ಚಿತ್ರವು ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ಎರಡು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು, ನಾಲ್ಕು ಫಿಲ್ಮ್ಫೇರ್ ಪ್ರಶಸ್ತಿಗಳನ್ನು  ಪಡೆದಿದೆ.

ಭಾಷೆ: ಮಲಯಾಳಂ.ನಿರ್ದೇಶಕ: ದಿಲೀಶ್ ಪೋಥನ್.ಪಾತ್ರವರ್ಗ: ಫಹಾದ್ ಫಾಸಿಲ್, ನಿಮಿಷಾ ಸಜಯನ್.

ನಾಯಕಿ ಶ್ರೀಜಾ ಅವರ ತಂದೆ ಈ ಮದುವೆಗೆ ನಿರಾಕರಿಸಿದ ಕಾರಣಕ್ಕೆ ಪ್ರಸಾದ್ ಮತ್ತು ಶ್ರೀಜಾ ಮದುವೆಯ ನಂತರ ಕಾಸರಗೋಡಿಗೆ ತೆರಳುತ್ತಾರೆ, 

ಪ್ರಸಾದ್ ಮತ್ತು ಶ್ರೀಜಾ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಶ್ರೀಜಾಳ ಚಿನ್ನದ ಸರ ಕಳ್ಳತನ ಆಗುತ್ತೆ.ಕದ್ದವನ ಹೆಸರು ಕೂಡ ಪ್ರಸಾದ್. (ಫಹಾದ್ ಫಾಸಿಲ್). ನಿದ್ದೆಯ ಮಂಪರಿನಲ್ಲಿದ್ದ ಶ್ರೀಜಾಳಿಗೆ ಅವನ ಕೃತ್ಯ ಅರಿವಿಗೆ ಬಂದು ಸಹಾಯಕ್ಕಾಗಿ ಕೂಗಿದಾಗ ಕಳ್ಳನು ಸರವನ್ನು ನುಂಗುತ್ತಾನೆ. ಸಿಕ್ಕಿಹಾಕಿಕೊಂಡ, ಅವನನ್ನು ಹತ್ತಿರದ ಪೊಲೀಸ್ ಠಾಣೆಗೆ ಕರೆದೊಯ್ಯುತ್ತಾರೆ. ಪೊಲೀಸ್ ವಿಚಾರಣೆಯಲ್ಲಿ ಪ್ರಸಾದ್ (ಕಳ್ಳ) ಈ ಕೃತ್ಯವನ್ನು ನಿರಾಕರಿಸುತ್ತಾನೆ. ವೈದ್ಯಕೀಯ ಪರೀಕ್ಷೆಯ ನಂತರ, ಸರ ಅವನ ಹೊಟ್ಟೆಯೊಳಗೆ ಸಿಲುಕಿಕೊಂಡಿರುವುದು ಕಂಡುಬರುತ್ತದೆ. ಮರುದಿನ ಬೆಳಿಗ್ಗೆ ಪೊಲೀಸರು ಆತನನ್ನು ಶೌಚಾಲಯಕ್ಕೆ ಕರೆದು ಕೊಂಡು ಹೋದ ಸಮಯದಲ್ಲಿ ಅವನು ಓಡಿಹೋಗಲು ಪ್ರಯತ್ನಿಸುತ್ತಾನೆ, ಪ್ರಸಾದ್ (ಶ್ರೀಜಾಳ ಪತಿ) ನಿಂದ ಹಿಡಿದು ಮತ್ತೆ ಪೊಲೀಸ್ ಠಾಣೆಗೆ ಕರೆತರುತ್ತಾರೆ. ಠಾಣೆಯಲ್ಲಿ, ಎಎಸ್ಐ ಚಂದ್ರನ್ ಅವರು  ಓಡಿಹೋಗುವಂತೆ ಹೇಳಿದ್ದರು ಎಂದು ಸುಳ್ಳು ಹೇಳುತ್ತಾನೆ. ಅಪಾಯದಲ್ಲಿದ್ದ ತನ್ನ ಕೆಲಸವನ್ನು ಉಳಿಸಿಕೊಳ್ಳಲು, ಎಎಸ್ಐ ಚಂದ್ರನ್ ವಿಷಯವನ್ನು ಇತ್ಯರ್ಥಗೊಳಿಸಲು ಶ್ರೀಜಾಗೆ ತಮ್ಮ  ಚಿನ್ನದ ಸರವನ್ನು ನೀಡುತ್ತಾರೆ. ಮರುದಿನ ಶ್ರೀಜಾ ಪೊಲೀಸರು ಕಂಡುಕೊಂಡ ಸರ ತನ್ನದೇ ಎಂದು ಒಪ್ಪಿಕೊಂಡು ಪ್ರಸಾದ್ (ಕಳ್ಳ) ತಪ್ಪಿತಸ್ಥನೆಂದು ಹೇಳುವ ದಾಖಲೆಗೆ ಸಹಿ ಹಾಕುತ್ತಾರೆ. ಕ್ಷಣಾರ್ಧದಲ್ಲಿ ಪೊಲೀಸರ ಅನುಪಸ್ಥಿತಿಯಲ್ಲಿ, ಪ್ರಸಾದ್ (ಕಳ್ಳ) ಶ್ರೀಜಾಳಿಗೆ ಆ ಸರ ಅವಳಿಗೆ ಸೇರಿದ್ದಲ್ಲ ಎಂಬ  ಸತ್ಯವನ್ನು ನ್ಯಾಯಾಲಯದಲ್ಲಿ ಹೇಳಬೇಕೆಂದು, ಮತ್ತು ಅವನು ಕದ್ದ ಚಿನ್ನದ ಸರವನ್ನು ಎಲ್ಲಿ ಎಸೆದನೆಂದು ಹೇಳುತ್ತಾನೆ. 

ನಂತರ ಶ್ರೀಜಾ ಪತಿ (ಪ್ರಸಾದ್) ಸರವನ್ನು ಹುಡುಕುತ್ತಾರೆ. ಕೊನೆಯಲ್ಲಿ ಪ್ರಸಾದ್(ಕಳ್ಳ)  ಶ್ರೀಜಾ ಅವರಿಗೆ ಧನ್ಯವಾದ ಪತ್ರ ಬರೆಯುತ್ತಾನೆ. ಬಹುಶಃ ನ್ಯಾಯಾಲಯದಲ್ಲಿ ಶ್ರೀಜಾ ಅವರ ಸತ್ಯದ ಹೇಳಿಕೆಯಿಂದಾಗಿ ಪ್ರಸಾದ್ (ಕಳ್ಳ)ರನ್ನು ಮುಕ್ತಗೊಳಿಸಿದ ಕಾರಣ ಕೃತಜ್ಞತೆಗಾಗಿ..

ಕಥೆಯನ್ನು ಪ್ರಚೋದಿಸುವ ಕಳ್ಳನ ಪಾತ್ರದಲ್ಲಿ ಪಹಾದ್ ಫಾಸಿಲ್ ಅವರ ನಟನೆ ಅದ್ಭುತ.ಹಸಿದ ಮಗುವಿನೊಂದಿಗೆ ಅವನು ತನ್ನನ್ನು ಗುರುತಿಸಿಕೊಳ್ಳುವ ದೃಶ್ಯ; ತನ್ನ ಬದುಕಿನ ಹಾದಿಯಲ್ಲಿ ಆಕಸ್ಮಿಕವಾಗಿ ಸಿಕ್ಕು,ಅವರಿಂದ ದೊರೆತ ಭರವಸೆಗಾಗಿ ಅವರಿಗೆ ಧನ್ಯವಾದ ನೀಡುವ ಪತ್ರವನ್ನು ಮೇಲ್ ಮಾಡುವ ದೃಶ್ಯಗಳು.”ಸ್ಕ್ರಿಪ್ಟ್  ಈಸ್ ದಿ ಹೀರೋ” ಅನ್ನೋದನ್ನು ಪ್ರತಿಪಾದಿಸುತ್ತದೆ.ನಿರ್ದೇಶಕ ದಿಲೀಶ್ ಪೋಥನ್ ಅವರ ಅದ್ಭುತ ನೈಜ ಚಿತ್ರ..ನಿಮ್ಮನ್ನು ಯೋಚಿಸುವಂತೆ ಮಾಡುತ್ತದೆ, ಮತ್ತು ಅದೇ ಸಮಯದಲ್ಲಿ ನಿಮ್ಮನ್ನು ನಗುವಂತೆ ಮಾಡುತ್ತದೆ.

ಈ ಸುಂದರವಾದ ಸಾಲುಗಳಲ್ಲಿ ಇಡೀ ಕಥೆಯ ಸಾರ ಬಿಂಬಿತವಾಗಿದೆ..

“ಸಮಯ ಬಂದು ಹೋಗುತ್ತದೆ ಯಾವುದೇ ಕುರುಹುಗಳನ್ನು ಬಿಡದೆ,  ದುಃಖದಿಂದ ತುಂಬಿದ ಕ್ಷಣಗಳನ್ನು ತರಬಹುದು, ಭರವಸೆಗಳಿಂದ ತುಂಬಿದ ಕ್ಷಣಗಳು ತರಬಹುದು.. ಯಾರಿಗೆ ಗೊತ್ತು? ನನ್ನ ಜೀವನದಲ್ಲಿ ನೀವು ಭರವಸೆಯ ಬೆಳಕನ್ನು ಹರಡಬಹುದೇ

ಎಲ್ಲಾ ಜವಾಬ್ದಾರಿಗಳ ಮಧ್ಯೆ ನಾವು ಜೀವನದ ಓಟದಲ್ಲಿ ಸಿಲುಕಿಕೊಳ್ಳುತ್ತೇವೆ.

ಸ್ಪರ್ಧೆಯ ಮಧ್ಯೆ ನಮ್ಮನ್ನು ನಾವು ಮರೆತುಬಿಡುತ್ತೇವೆ.

ಹಳೆಯದರಿಂದ ಬೇಸತ್ತ ನಾವು ಹೊಸ ಮಾರ್ಗವನ್ನು ಕಂಡುಕೊಳ್ಳುವ ಹಾದಿಯಲ್ಲಿ ದುಃಖದ ಕ್ಷಣಗಳನ್ನು ನಿಧಾನವಾಗಿ ಮರೆತುಬಿಡುತ್ತೇವೆ ಮತ್ತು ಕೊನೆಯ ಕ್ಷಣದವರೆಗೂ ಕಾಯುತ್ತೇವೆ.”

***

Thondimuthalum Driksakshiyum(The Exhibits and the Eye Witness) movie review..

I watched Thondimuthalum Driksakshiyum(The Exhibits and the Eye Witness) on Hotstar.The film won three National Film Awards, two Kerala State Film Awards, four Filmfare Awards Language: Malayalam Director: Dileesh Pothan. Cast: Fahadh Faasil, Nimisha Sajayan, 

We have here the story of Prasad and Sreeja, who, after marriage, move to Kasaragod, because her father disapproved of this match.

Prasad and Sreeja were travelling in a bus Sreeja’s gold chain is stolen by a thief whose name also Prasad. (Fahadh Faasil). He swallows the chain,  He gets caught by the passengers, who take him to the nearby police station. On police inquiry, Prasad (thief) denies the act. after a medical examination, the chain is found stuck inside his stomach.  He tries to run away, when Police accompany him to the toilet. caught by the Prasad (Sreeja’s husband)  brought back to the police station. In the police station, he claims  ASI Chandran had told him to run away . Finding his job in danger, ASI Chandran gives Sreeja a gold chain of him to settle the matter in a way Prasad (thief) being guilty.

 Next day Sreeja confesses that the chain found by police belongs to her and sign the document which claims that Prasad (thief) is guilty.

 In a momentary absence of police, Prasad (thief) tells Sreeja she should tell the truth in the court that the chain does not belong to her and he also tells her husband where he actually threw her gold chain. Sreeja’s husband (Prasad) finds the chain.

At the end Prasad (thief) writes a thank you note to Srija. Perhaps Prasad (thief) was freed due to Srija’s statement of truth in the court.

Pahad Fasil’s role as the thief who triggers the story is amazing.The scene where he identifies himself with a hungry child;

Scenes of mailing a thank you letter to the hope that came his way of life, unexpectedly.
.. “Script is the Hero” makes you think.

 The essence of the whole story is reflected in these beautiful lines..

Time may come and go, without leaving any traces, it can bring moments of sadness, moments filled with hopes.. Who knows? 

Can you spread the light of hope in my life?..

Amidst all the responsibilities we get caught up in the race of life.

In the midst of competition, we forget about ourselves. Tired of the old, we slowly forget about the sad moments and wait until the last moment on the road to finding a new path..”

Thank you for reading 😊

Kamala Belagur.

4 thoughts on “ಥೋಂಡಿ ಮುಥಲಮ್ ದೃಕ್ಸಾಕ್ಷಿಯಂ(The Exhibits and the Eye Witness) ಚಿತ್ರ ವಿಮರ್ಶೆ..

  1. Thanks for reading and sharing dear..💕
    Malayalam is a beautiful language, very close to Kannada.It makes some sense ..
    Very easy if there are English subtitles.I like Malayalam movies very much, because it reflects the reality of our lives ..

    Like

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s