ಹೂವಿನ ಮನ..

ಚಿತ್ರ ಕೃಪೆ. ಅಂತರ್ಜಾಲ

ಹುಟ್ಟಿದ್ದು ನಿನ್ನೊಡಲಲ್ಲಿ,

ಮರಳುವುದು ನಿನ್ನ ಮಡಿಲಿಗೆ,

ಇರುವ ನಡುವಿನ ಜೀವನ

ಅರಳಿ ನಗುವ ಹೂವಿನ ಮನ..


ಇರದುದರೆಡೆಗಿನ ತುಡಿತದ

ಮೋಹವಿಲ್ಲ.

ಮರೆತ ಹೃದಯಗಳಿಗೆ

ನೆನಪಿಸುವ ಹಪಹಪಿಯಿಲ್ಲ..

ಮರೆತದಕ್ಕೆ ಶೋಕವಿಲ್ಲ.


ನಾನೇ ಮೆರೆಯಬೇಕೆನ್ನುವ

ಅಹಂಕಾರವಿಲ್ಲ ,

ಮತ್ಸರವಿಲ್ಲ,

ಸೋತದ್ದಕ್ಕೆ ಹತಾಶೆಯಿಲ್ಲ

ಹೊಸೆದು ಹಾಕಬೇಕೆಂಬ

ಕ್ರೌರ್ಯವಿಲ್ಲ..


ಮನ್ನಣೆಗೆ ಮಣಿಯದ,

ಎಲ್ಲವೂ ನಿನ್ನದೇ ದೇಣಿಗೆ

ಎಂಬುದೊಂದು 

ಆತ್ಮ ಸಮರ್ಪಣೆಯ ಭಾವ.

ಇದಲ್ಲವೇ ಸುಂದರ, ಸ್ನಿಗ್ಧ, 

ಸಾರ್ಥಕ್ಯ ಬದುಕು.. 


ಕಮಲ ಬೆಲಗೂರ್.

7 thoughts on “ಹೂವಿನ ಮನ..

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s